ಸದನದಲ್ಲೇ ತಕ್ಕ ಉತ್ತರ ನೀಡುವೆ – ಎತ್ತಿನಗಾಡಿ ಪ್ರತಿಭಟನೆಗೆ ಸಿಎಂ ಕಿಡಿ…

76
firstsuddi

ಬೆಂಗಳೂರು : ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಎತ್ತಿನಗಾಡಿ ಚಲೋ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಈ ರೀತಿಯ ಪ್ರತಿಭಟನೆ ಮಾಡಬೇಕಿತ್ತು. ಬೆಲೆ ಏರಿಕೆ ಆಗಿದ್ದು, ಈಗಷ್ಟೇ ಅಲ್ಲ ಬಹಳ ದಿನಗಳೇ ಆಗಿವೆ. ಆದರೆ, ಆಗ ಸುಮ್ಮನಿದ್ದ ಕಾಂಗ್ರೆಸ್ಸಿಗರು ಈಗ ಹೋರಾಟ ಮಾಡುತ್ತಿದ್ದಾರೆ. ಬೆಲೆ ಏರಿಕೆಯ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತುತ್ತಾರಂತೆ. ಕಾಂಗ್ರೆಸ್ ನವರ ಪ್ರಶ್ನೆಗಳಿಗೆ ನಾನು ತಕ್ಕ ಉತ್ತರ ನೀಡುತ್ತೇನೆ ಎಂದು ಸಿಎಂ ಗರಂ ಆದರು.