ಸರ್ಕಾರದಿಂದ ಸಿಗುವ ವಸತಿ, ನಿವೇಶನದ ಅನುದಾನ ಹೆಚ್ಚಿಸಲು ಆಗ್ರಹ…

133
firstsuddi

ಕೊಟ್ಟಿಗೆಹಾರ : ಸರ್ಕಾರದಿಂದ ವಿವಿಧ ಯೋಜನೆಯಡಿ ನೀಡುವ ವಸತಿ, ನಿವೇಶನಗಳ ಅನುದಾನವನ್ನು ಹೆಚ್ಚಿಸಬೇಕು ಎಂದು ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಇರ್ಪಾನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಣಕಲ್ ಮಾತ್ರವಲ್ಲದೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಸತಿ ರಹಿತರ ಸಂಖ್ಯೆ ಹೆಚ್ಚಿದೆ. ಆದರೆ ಸರ್ಕಾರ ನೀಡುವ ಅನುದಾನ ಕಡಿಮೆಯಾಗುತ್ತಿದೆ. ಪ್ರತಿ ವರ್ಷ ಮನೆ ಕಟ್ಟಲು ಕಚ್ಚಾವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪ್ರತಿವರ್ಷವೂ ಗ್ರಾಮ ಪಂಚಾಯಿಗಳಿಗೆ ನೂರು ಮನೆಗಳನ್ನು ನೀಡಬೇಕು. ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೀಜನೆಗೆ ರೂ1.20 ಲಕ್ಷದಿಂದ ರೂ 1.80 ಲಕ್ಷ ಅನುದಾನ ನೀಡುತ್ತಿದೆ. ಇದರಿಂದ ವಸತಿ ರಹಿತರು ಮನೆ ಕಟ್ಟಿಕೊಳ್ಳಲು ಕಷ್ಟಸಾಧ್ಯವಾಗಿದೆ. ಕಡಿಮೆ ಅನುದಾನದಿಂದ ವಸತಿ ರಹಿತರು ಮನೆ ಕಟ್ಟಲು ಸಾಧ್ಯವಾಗದೇ ಪರದಾಡುವಂತಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ವಸತಿ, ನಿವೇಶನಗಳ ರಹಿತರಿಗೆ 5ವ ಲಕ್ಷ ಅನುದಾನ ನೀಡಿದರೆ ಬಡವರು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ವಸತಿ ನಿವೇಶನ ನೀಡುವ ಬಡವರಿಗೆ ವಾರ್ಷಿಕ ಆದಾಯವನ್ನು 32 ಸಾವಿರದಿಂದ 1.20 ಲಕ್ಷಕ್ಕೆ ಹೆಚ್ಚಿಸಬೇಕು. ಬಡವರಿಗೆ 32 ಸಾವಿರ ಆದಾಯ ಅವೈಜ್ಞಾನಿಕವಾಗಿದೆ ಎಂದರು.

ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆ ಇದ್ದುದರಿಂದ ಬಣಕಲ್ ಸುತ್ತಮುತ್ತಲಿನ ಅಭಿವೃದ್ದಿ ಮಾಡಬೇಕಾದ ರಸ್ತೆಗಳು ನೀತಿ ಸಂಹಿತೆಯಿಂದ ಕಾಮಗಾರಿ ನಿಂತಿದ್ದವು. ಆದರೆ ಈಗ ಚುನಾವಣೆ ಮುಗಿದಿದೆ. ಬಾಕಿ ಇರುವ ರಸ್ತೆ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಬರುವ ಮೊದಲು ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.