ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ನೇಣು ಬಿಗಿದುಕೊಂಡು ವೈದ್ಯ ಆತ್ಮಹತ್ಯೆ…

618
firstsuddi

ಹರಿಯಾಣ: ಸಹೋದರಿಯ ಮದುವೆಗೆ ವಿಭಾಗದ ಮುಖ್ಯಸ್ಥೆ ರಜೆ ನೀಡಲಿಲ್ಲ ಎಂದು ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ನಡೆದಿದೆ. ಓಂಕಾರ್(30) ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿ ಎನ್ನಲಾಗಿದ್ದು, ಮೃತರು ಧಾರವಾಡ ಮೂಲದವರು ಎಂದು ತಿಳಿದು ಬಂದಿದ್ದು, ರೋಹ್ಟಕ್‍ನಲ್ಲಿರುವ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದು, ತನ್ನ ಸಹೋದರಿಯ ವಿವಾಹಕ್ಕೆಂದು ರಜೆ ಕೇಳಿದ್ದರು. ಆದರೆ ವಿಭಾಗದ ಮುಖ್ಯಸ್ಥರು ವೈದ್ಯರ ಪ್ರತಿಭಟನೆ ನಡೆಯುತ್ತಿರುವುದರಿಂದ ರಜೆ ನೀಡಲು ಆಗುವುದಿಲ್ಲ ಎಂದು ರಜೆ ನಿರಾಕರಿಸಿದ್ದು, ಇದಕ್ಕೆ ಮನನೊಂದ ಓಂಕಾರ್ ಅವರು ಹಾಸ್ಟೆಲ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.