ಸಾವರ್ಕರ್ ಭಾವಚಿತ್ರ ಸುಟ್ಟ ಪ್ರಕರಣ ; ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್…

56
firstsuddi

ಧಾರವಾಡ : ವಿ.ಡಿ ಸಾವರ್ಕರ್ ಫೋಟೋ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬಜರಂಗ ದಳ ಮುಖಂಡ ಶಿವಾನಂದ ಸತ್ತಿಗೇರಿ ಅವರ ದೂರನ್ನು ಆಧರಿಸಿ ಧಾರವಾಡ ಉಪನಗರ ಠಾಣೆಯಲ್ಲಿ ಕಾಂಗ್ರೆಸ್ ಮಹಾನಗರ, ಗ್ರಾಮೀಣ ಜಿಲ್ಲಾಧ್ಯಕ್ಷ ಸೇರಿದಂತೆ 12 ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ನಿನ್ನೆ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕೃತಿ ದಹಿಸಿ ಸಾವರ್ಕರ್ ಭಾವಚಿತ್ರಕ್ಕೆ ಮೊಟ್ಟೆಯಿಂದ ಹೊಡೆದಿದ್ದರು. ಅಷ್ಟೇ ಅಲ್ಲದೇ ಸಾವರ್ಕರ್ ಫೊಟೋಗಳನ್ನೂ ಕಾರ್ಯಕರ್ತರು ಸುಟ್ಟಿದ್ದರು. ಈ ಹಿನ್ನೆಲೆ ಹಿಂದೂಪರ ಮುಖಂಡ ಸತ್ತಿಗೇರಿ ದೂರು ದಾಖಲಿಸಿದ್ದರು.

ಎಫ್ ಐಆರ್ ನಲ್ಲಿ ಅರವಿಂದ ಏಗನಗೌಡರ್ ಆರೋಪಿ ನಂ.1 ಮಾಡಲಾಗಿದೆ. ಅರವಿಂದ್ ಏಗನಗೌಡರ್ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.