ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಈ ಮಧ್ಯೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀ, ನಾಯಕತ್ವದ ಬಗ್ಗೆ ಚರ್ಚೆ ವಿಚಾರವಾಗಿ ಮಾಧ್ಯಮಗಳ ಜೊತೆ ಪ್ರತಿಕ್ರಯಿಸಿದ ಅವರು, ಸಿಎಂ ಬದಲಾವಣೆ ಮಾಡಿ ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ಸಿಎಂ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ. ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಸ್ವಾಮೀಜಿಗಳು ಕೇವಲ ಬೆಡ್ ಸಿಕ್ಕಿಲ್ಲ ಅಂತ ಹೋರಾಟ ಮಾಡಬೇಕು. ಸಿಎಂ ಬದಲಿಸುವ ವಿಚಾರ ಹೈಕಮಾಂಡ್ ಮಾಡಿದ್ದರೆ ಸಲಹೆ ನೀಡಬಹುದು ಅಷ್ಟೇ. ಬದಲಿಸಿ ಎಂದು ಒತ್ತಡ ಹಾಕುವ ಹಕ್ಕು ನಮಗಿಲ್ಲ ಎಂದರು.
ಯಡಿಯೂರಪ್ಪನವರ ಬದಲಿಗೆ ನಾಯಕರಿಲ್ಲ ಎಂದು ಬಿಂಬಿಸುವುದು ಬೇಡ. ನಮ್ಮ ಉತ್ತರ ಕರ್ನಾಟಕದಲ್ಲಿ ನಾಯಕರು ತುಂಬಿ ತುಳುಕುತ್ತಿದ್ದಾರೆ. ಸಿಎಂ ಬದಲಾವಣೆ ಮಾಡಿದ್ದೇ ಆದಲ್ಲಿ ಉತ್ತರ ಕರ್ನಾಟಕದವರಿಗೆ ನೀಡಬೇಕು. ಅದರಲ್ಲೂ ಲಿಂಗಾಯತರನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಅದು ಬಿಟ್ಟರೆ ನಾನು ಸಿಎಂ ಬದಲಾವಣೆಗೆ ಒತ್ತಾಯ ಮಾಡುವುದಿಲ್ಲ ಎಂದರು.










