ಸಿಎಂ ಯಡಿಯೂರಪ್ಪ ಟೆಂಪಲ್ ರನ್ ಶುರು…

256
firstsuddi

ಚಿಕ್ಕಮಗಳೂರು : ಒಂದೆಡೆ ನೆರೆಯಿಂದ ಕಂಗೆಟ್ಟಿರುವ ಉತ್ತರದ ಜನತೆ. ಮತ್ತೊಂದೆಡೆ ಭಾರೀ ಮಳೆಯಿಂದ ತತ್ತರಿಸಿರುವ ಮಲೆನಾಡು ಜನ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಅನ್ನಿಸಿದರು, ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿರುವುದರಿಂದ ಸಂಪೂರ್ಣವಾಗಿ ಟೇಕಾಫ್ ಆಗದ ಸರ್ಕಾರವನ್ನು ಸರಿದಿಕ್ಕಿನಲ್ಲಿ ಮುನ್ನಡೆಸಬೇಕಾದ ಸವಾಲು ಮತ್ತೊಂದೆಡೆ. ಹೀಗಾಗಿ ಎದುರಾಗಲಿರುವ ಸಂಕಷ್ಟಗಳಿಂದ ಪಾರು ಮಾಡೆಂದು ಸಿಎಂ ಯಡಿಯೂರಪ್ಪ ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ಶೃಂಗೇರಿಗೆ ತೆರಳಿ ಶಾರದಾಂಭೆ ದರ್ಶನ ಮಾಡಲಿರುವ ಬಿಎಸ್ ವೈ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಶಾರದಾಂಭೆ ದರ್ಶನದ ಬಳಿಕ ಕೊಪ್ಪ ತಾಲೂಕಿನ ಗೌರಿ ಗದ್ದೆ ದತ್ತಾಶ್ರಮಕ್ಕೆ ಭೇಟಿ ನೀಡಿ ಅವಧೂತ ವಿನಯ್ ಗುರೂಜಿ ಭೇಟಿ ಮಾಡಿ ಅಶೀರ್ವಾದ ಪಡೆಯಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಡಲಿರುವ ಸಿಎಂ 10.30 ಕ್ಕೆ ಶೃಂಗೇರಿಗೆ ಆಗಮಿಸಲಿದ್ದಾರೆ. ಶೃಂಗೇರಿ ಹಾಗೂ ಕೊಪ್ಪ ಕಾರ್ಯಕ್ರಮಗಳನ್ನು ಮುಗಿಸಿ 1.30ಕ್ಕೆ ಮತ್ತೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಸಿಎಂ ಆದ ಬಳಿಕ ಎರಡನೇ ಬಾರಿ ಶೃಂಗೇರಿಗೆ ಆಗಮಿಸುತ್ತಿರುವ ಬಿಎಸ್ ವೈ ಅವರು ನೆರೆ ವೀಕ್ಷಣೆಗೆ ಬಂದು ಹತ್ತೇ ನಿಮಿಷಕ್ಕೆ ವಾಪಸ್ಸಾಗಿದ್ದರು.