ಸಿದ್ದರಾಮಯ್ಯಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ : ಸಿಎಂ ಬೊಮ್ಮಾಯಿ.

79
firstsuddi

ಬೆಂಗಳೂರು : ಸಿದ್ದರಾಮಯ್ಯ ಅವರಿಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ. ಅರ್ಕಾವತಿ ರಿಡೂ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಸುಳ್ಳು ಹೇಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅರ್ಕಾವತಿ ರಿಡೂ ಅಕ್ರಮದ ಬಗ್ಗೆ ಬೊಮ್ಮಾಯಿ ಹೇಳ್ತಿರೋದಲ್ಲ. ನ್ಯಾ.ಕೆಂಪಣ್ಣ ಆಯೋಗ ಹೇಳಿರೋದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಕೆ.ಸಿ.ರೆಡ್ಡಿ ಕಂಚಿನ ಪ್ರತಿಮೆ ಅನಾವರಣ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನಲ್ಲಿ ಕಮೀಷನ್ ರಿಪೋರ್ಟ್ ನಾನು ಓದಿದ್ದು. ಬೊಮ್ಮಾಯಿ ಹುಡುಕಿದ್ದಲ್ಲ ಸುಳ್ಳು ಹೇಳೋದಕ್ಕೆ. ಅವರೇ ನೇಮಿಸಿದ ಸಮಿತಿ. ಸುದೀರ್ಘವಾಗಿ ತನಿಖೆ ಮಾಡಿ ವರದಿ ಕೊಟ್ಟಿರೋದು. ಕೆಂಪಣ್ಣ ಅವರ ವರದಿ ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್ ಅವರು ಸುಳ್ಳು ಹೇಳ್ತಿರೋದು. ಅಧಿಕಾರಿಗಳು ತೆಗೆದುಕೊಂಡು ಬಂದಿರೋದಕ್ಕೆ ಅನುಮೋದಿಸಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಅರ್ಥ ಏನು. ಅವರು ತಪ್ಪು ಮಾಡಿದ್ದಾರೆ ಅಂತ ಅರ್ಥ ಅಲ್ಲವಾ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅಕ್ರಮದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ನಲ್ಲಿ ವಾದ ಮಂಡಿಸಿದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಅಡ್ವೋಕೇಟ್ ಜನರಲ್ ವಾದ ಮಾಡಿದ ಮೇಲೆ ನ್ಯಾಯಾಧೀಶರು ಏನ್ ಹೇಳಿದ್ದಾರೆ? ಅದು ಮುಖ್ಯ. ನಮಗೆ ಬೇಕಾದ ಹಾಗೆ ವಾದ ಮಾಡಿಕೊಳ್ಳುತ್ತೇವೆ. ಭ್ರಷ್ಟಾಚಾರ ರಕ್ಷಣೆಗೆ, ಜನಪ್ರತಿನಿಧಿಗಳ ರಕ್ಷಣೆಗೆ ಎಸಿಬಿ ಮಾಡಿದ್ರು ಎಂದು ಬಹಳ ಸ್ಪಷ್ಟವಾಗಿ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದಾರೆ. ಅದನ್ನೆ ನಾನು ಹೇಳಿರೋದು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.