ಮಂಡ್ಯ : ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುವುದನ್ನು ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ ಎಂದು ಶಾಸಕ ಅನ್ನದಾನಿ ಅವರು ಸಿದ್ದರಾಮಯ್ಯ ಅವರನ್ನು ಮಳವಳ್ಳಿ ತಾಲ್ಲೂಕಿನ ಸಾಹಳ್ಳಿಯ ಗ್ರಾಮದೇವತೆ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.
ಹಿಂದುಳಿದ ವರ್ಗದವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ ಧೀಮಂತ ನಾಯಕ ಸಿದ್ದರಾಮಯ್ಯನವರು ನಾನು ಅವರ ಗರಡಿಯಲ್ಲಿ ಬೆಳೆದು ಬಂದವನು. ಮೊದಲು ಸಿದ್ದರಾಮಯ್ಯನವರು ಜೆಡಿಎಸ್ ನಲ್ಲಿ ಇದ್ದಾಗ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದೆ ಬಳಿಕ ಬದಲಾದ ರಾಜಕಾರಣದಲ್ಲಿ ಅವರು ಕಾಂಗ್ರೆಸ್‍ಗೆ ಸೇರಿಕೊಂಡರು ನಾನು ಜೆಡಿಎಸ್‍ನಲ್ಲೇ ಉಳಿದುಕೊಂಡೆ. ಆದರೆ ಈಗಲೂ ನನಗೆ ಅದೇ ಅಭಿಮಾನ ಹಾಗೂ ಒಡನಾಟ ಇದೆ. ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ನಾಯಕ ಸಿದ್ದರಾಮಯ್ಯ ಎಂದರು.










