ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ತುಮಕೂರಿನಲ್ಲಿ ಸಾವರ್ಕರ್ ಪಾರ್ಕ್ – ಕಾಂಗ್ರೆಸ್‍ಗೆ ಮುಖಭಂಗ…

73
firstsuddi

ತುಮಕೂರು : ಇಷ್ಟು ದಿನ ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವಂತಹ ಸುದ್ದಿಯೊಂದು ಹೊರಬಿದ್ದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ, ತುಮಕೂರಿನಲ್ಲಿ ಸಾವರ್ಕರ್ ಹೆಸರಿನ ಉದ್ಯಾನವನ್ನು ಉದ್ಘಾಟಿಸಲಾಗಿತ್ತು.

ತುಮಕೂರಿನಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ವೀರ ಸಾವರ್ಕರ್ ಹೆಸರಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ತುಮಕೂರು ನಗರದ ಸೋಮೇಶ್ವರಪುರಂ ಬಡಾವಣೆಯ ಉದ್ಯಾನವನಕ್ಕೆ ಸ್ವಾತಂತ್ರ್ಯ ವೀರ ಶ್ರೀ ವಿನಾಯಕ ದಾಮೋದರ ಸಾವರ್ಕರ್ ಪಾರ್ಕ್ ಎಂದು ಹೆಸರಿಟ್ಟು, 2016 ಸೆಪ್ಟೆಂಬರ್ 06 ರಂದು ಲೋಕಾರ್ಪಣೆ ಸಹ ಮಾಡಲಾಗಿದೆ.

ಅಂದಿನ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್, ತುಮಕೂರು ನಗರ ಕಾಂಗ್ರೆಸ್ ಶಾಸಕ ರಫಿಕ್ ಅಹಮದ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹಸಚಿವರಾಗಿದ್ದ ಜಿ.ಪರಮೇಶ್ವರ, ಸಂಸದರಾಗಿದ್ದ ಮುದ್ದಹನುಮೇಗೌಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದೀಗ ಸಾವರ್ಕರ್ ವಿವಾದದ ಹೊತ್ತಲ್ಲಿ ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.