ಸುದ್ದಿ ಮಾಡುವುದ ಸುಲಭ, ಆ ಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ಮನೆಮನೆಗೆ ತಲುಪಿಸುವುದು ಕಷ್ಟ: ಬಿ.ಬಿ.ನಿಂಗಯ್ಯ

48
??????

ಮೂಡಿಗೆರೆ : ಸುದ್ದಿ ಮಾಡುವುದ ಸುಲಭ ಆದರೆ ಬಂದAತಹ ಸುದ್ದಿಗಳು ಸಾರ್ವಜನಿಕಜರಿಗೆ ತಲುಪಬೇಕೆಂದರೆ ಆ ಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ಮನೆಮನೆಗೆ ತಲುಪಿಸುವುದು ಬಹಳ ಕಷ್ಟಕರ ಸಂಗತಿಯಾಗಿದೆ. ಇಂದು ಯಾರು ಬೇಕಾದರೂ ಸುದ್ದಿಗಳನ್ನು ಮಾಡಬಹುದು ಆದರೆ ಪತ್ರಿಕೆಗಳನ್ನು ಹಂಚಲು ಸಾಧ್ಯವಿಲ್ಲಾ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಎ. ಎಸ್‌.ಎನ್. ಕ್ರಿಯೇಷಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨ ದಿನಗಳ ನೃತ್ಯ ,ಕಿರುಚಿತ್ರ, ಪ್ಯಾಷನ್ ಶೋ ಕಾರ್ಯ ಕ್ರಮದಲ್ಲಿ ಮೂಡಿಗೆರೆಯ ಪತ್ರಿಕಾ ವಿತರಕ ಮೊಹಮ್ಮದ್ ಜಾಹೀರ್ ಅವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು. ಕಳೆದ ಐವತ್ತು ವರ್ಷಗಳಿಂದ ಗಾಳಿ ಮಳೆ ಎನ್ನದೆ ಪತ್ರಿಕೆಗಳ ಏಜೆನ್ಸಿಯನ್ನು ನಡೆಸಿಕೊಂಡು ಮನೆಮನೆಗೆ ತಲುಪಿಸುತ್ತಿರುವ ಕಾಯಕ ಮಾಡುತ್ತಿರುವ ಮಹಮ್ಮದ್ ಜಾಹೀರ್ ಅಪರೂಪದ ವ್ಯಕ್ತಿ ಎಂದರು.ಇಂತಹ ಕಾರ್ಯಕ್ರಮದಲ್ಲಿ ಸೈನಿಕರನ್ನು ನೆನಪಿಸಿಕೊಂಡು ಮೂವರು ಸೈನಿಕರನ್ನು ಕರೆದು ಅವರ ಪಾದ ಪೂಜೆ ಮಾಡಿ, ಸನ್ಮಾನಿಸಿ ಅಭಿನಂದಿಸಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶದ ಗಡಿ ಕಾಯುವ ಯೋದರ ಬಗ್ಗೆ ಮತ್ತು ಅವರ ಕಾರ್ಯದ ಬಗ್ಗೆ ತಿಳಿಸುವುದರ ಮೂಲಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿರುವ ಕ್ರಿಯೇಷನ್ ಮುಖ್ಯಸ್ಥರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕ್ರಿಯೇಷನ್ ಮುಖ್ಯಸ್ಥರಾದ ಅಜಿತ್ ಕೆವಿಯರ್, ನವ್ಯಶ್ರೀ ಕೆವಿಯರ್, ಅಗ್ರಿಮಾರ್ಟ್ ಗಜೇಶ್ ಸೇರಿದಂತೆ ಅನೇಕ ಗಣ್ಯರು ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.