ಸೋಲುಗಳು ಜೀವನದ ಒಂದು ಭಾಗ : ಅಣ್ಣಾಮಲೈ ಟ್ವೀಟ್…

119
firstsuddi

ಚೆನ್ನೈ : ಬಿಜೆಪಿಯಿಂದ ಸ್ವಕ್ಷೇತ್ರ ತಮಿಳುನಾಡಿನ ಅರವಕುರುಚಿಯಿಂದ ಸ್ಪರ್ಧಿಸಿರುವ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿ ಆಗಿದ್ದ ಅಣ್ಣಾಮಲೈ ಅವರು ಸೋಲನ್ನು ಅನುಭವಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ ಅವರು, ಸೋಲುಗಳು ಜೀವನದ ಒಂದು ಭಾಗವಾಗಿದೆ. ಇಂಥಹ ಸೋಲುಗಳನ್ನು ನಾನು ಜೀವನದಲ್ಲಿ ಬಹಳ ನೋಡಿದ್ದೇನೆ. ನಾನು ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಿಲ್ಲ. ಅರವಕುರುಚಿ ಕ್ಚೇತ್ರದ ಮತದಾರರಿಗೆ ಧನ್ಯವಾದಗಳು. 68 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳೆಂದು ಟ್ವೀಟ್ ಮಾಡಿದ್ದಾರೆ.

ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸಿಗಂ ಎಂದೇ ಖ್ಯಾತಿ ಪಡೆದಿದ್ದ ಅಣ್ಣಾಮಲೈ ಅವರು ಐಪಿಎಸ್ ತೊರೆದು ರಾಜಕೀಯಕ್ಕೆ ಬಂದರು. ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ ಎಂದು ಹೇಳಿದ್ದ ಅಣ್ಣಾಮಲೈ ಅವರಿಗೆ ಮತದಾರರು ಕೈ ಹಿಡಿಯಲಿಲ್ಲ.