ಹುಬ್ಬಳ್ಳಿ : ಹೃದಯಾಘಾತದಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರ ಆತ್ಮೀಯ ಸ್ನೇಹಿತ ರಾಜು ಪಾಟೀಲ್ ನಿನ್ನೆ ಇಹಲೋಕ ತ್ಯಜಿಸಿದ್ದರು. ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ನಗರಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ ಅವರು ಸ್ನೇಹಿತನ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತರು.
ಪತ್ನಿ, ಪುತ್ರ, ಪುತ್ರಿ ಸಹೋದರಿಯೊಂದಿಗೆ ಹುಬ್ಬಳ್ಳಿಗೆ ಆಗಮಿಸಿದ ಬೊಮ್ಮಾಯಿ ರಾಜು ಪಾಟೀಲ್ ಅವರ ಪತ್ನಿ ಹಾಗೂ ಕುಟುಂಬಸ್ಥರನ್ನು ಸಮಾಧಾನಪಡಿಸಿದರು.
ಸಹೋದರ ಸಂಬಂಧಿ ಹಾಗೂ ಆಪ್ತ ಸ್ನೇಹಿತ ರಾಜು ಪಾಟೀಲ್ ಅವರು ಇಂದು ನಿಧನರಾಗಿದ್ದು, ನಾನು ತುಂಬಾ ದುಃಖಿತನಾಗಿದ್ದೇನೆ.
ರಾಜು ಪಾಟೀಲ್ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ರಾಜು ಪಾಟೀಲ್ ಒಬ್ಬ ಆಪ್ತ ಮಿತ್ರರಾಗಿದ್ದರು. ನಾವಿಬ್ಬರು ಬಾಲ್ಯದಿಂದ ಕೂಡಿಯೇ ಬೆಳೆದವರು. ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಅವರು ಸದಾ ನನ್ನ ಜತೆ ಇರುತ್ತಿದ್ದರು. pic.twitter.com/oRVuHAjuui— Basavaraj S Bommai (@BSBommai) September 15, 2021










