ಬೆಂಗಳೂರು : ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಅವರನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆದಂ ಪಾಷಾ ಅವರು ಈಗಾಗಲೇ ಪ್ರಕರಣದಲ್ಲಿ ಬಂಧನವಾಗಿರುವ ಪ್ರಮುಖ ಆರೋಪಿ ಡ್ರಗ್ ಪೆಡ್ಲರ್ ಅನಿಕಾ ಅವರಿಂದ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆ, ಬೆಂಗಳೂರು ಎನ್.ಸಿ,ಬಿ ಅಧಿಕಾರಿಗಳು ಆದಂ ಪಾಷಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಬಳಿಕ ಅವರನ್ನು ಎನ್.ಸಿ.ಬಿ. ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆದಂ ಪಾಷಾ ಅವರು ಅನಿಕಾ ಅವರು ಕಳೆದ ಒಂದು ವರ್ಷದ ಹಿಂದೆ ಕ್ಲಬ್ ಒಂದರಲ್ಲಿ ಪರಿಚಯವಾಗಿದ್ದರು. ಆದರೆ ಅವರು ಡ್ರಗ್ ಪೆಡ್ಲರ್ ಎಂದು ನನಗೆ ತಿಳಿದಿರಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಅನಿಕಾ ಅವರೊಂದಿಗೆ ಯಾರು ಬರುತಿದ್ದರು ಎಂಬುವುದು ನನಗೆ ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಲು ಮಾತ್ರ ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.










