ಬೆಂಗಳೂರು : ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಈ ಬಹು ನಿರೀಕ್ಷಿತ ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿ ಅವರು ನಿರ್ದೇಶಿಸುತ್ತಿದ್ದು, ಶಾಲಿನಿ ಮಂಜುನಾಥ್ ಹಾಗೂ ಜಾಕ್ ಮಂಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ಇಂದು ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಕಿಚ್ಚ ಸುದೀಪ್ ಅವರು ಸ್ಲೀವ್ಲೆಸ್ ಶರ್ಟ್ ಧರಿಸಿ ವಿಭಿನ್ನ ಶೈಲಿಯ ಆಸನದ ಮೇಲೆ ಕೈಯಲ್ಲಿ ಗನ್ ಹಿಡಿದು ಕುಳಿತಿರುವ ದೃಶ್ಯ ಕಂಡುಬಂದಿದ್ದು, ಸುದೀಪ್ ಅವರ ಲುಕ್ ಕಂಡು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.










