ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕ ಸಿ.ಜಯರಾಮ್ ಅವರು ತಡರಾತ್ರಿ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.
ಶಂಕರ್ ನಾಗ್ ನಟನೆಯ ‘ಆಟೋ ರಾಜ’, ಅನಂತ್ ನಾಗ್ ಅಭಿನಯದ ‘ನಾ ನಿನ್ನ ಬಿಡಲಾರೆ’, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಟಿಸಿದ್ದ ‘ಗಲಾಟೆ ಸಂಸಾರ’ ಶ್ರೀನಾಥ್-ಆರತಿ ಜೋಡಿಯ ‘ಪಾವನ ಗಂಗಾ’ ಮುಂತಾದ ಸಿನಿಮಾಗಳನ್ನು ಸಿ. ಜಯರಾಮ್ ನಿರ್ಮಾಣ ಮಾಡಿದ್ದರು.
ಇನ್ನು ಸಿ. ಜಯರಾಂ ಅವರು ಮಗ ಮಿಲನ ಪ್ರಕಾಶ್ ಹಾಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಪತ್ನಿ ಜಯಮ್ಮ ಅವರನ್ನ ಅಗಲಿದ್ದಾರೆ.
ಸದ್ಯ ಜಯರಾಮ್ ಅವರ ಪುತ್ರ ಮಿಲನ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶರಾಗಿ ಗುರುತಿಸಿಕೊಂಡಿದ್ದಾರೆ.










