ಸ್ಯಾಂಡಲ್ ವುಡ್ ನಟ ಆದಿತ್ಯ ವಿರುದ್ಧ ದೂರು ದಾಖಲು…

195
firstsuddi

ಬೆಂಗಳೂರು : ಸ್ಯಾಂಡಲ್ ವುಡ್ ನಟ ಆದಿತ್ಯ ಮತ್ತು ಅವರ ಕುಟುಂಬ ವಾಸವಿರುವ ಮನೆಯ ಮಾಲೀಕನಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದಿತ್ಯ ಅವರು ತಮ್ಮ ಕುಟುಂಬದೊಂದಿಗೆ 4ವರ್ಷಗಳಿಂದ ಸದಾಶಿವನಗರದ ಆರ್.ಎಂ.ವಿ ಬಡಾವಣೆಯಲ್ಲಿ ವಾಸವಾಗಿದ್ದು, ಕಳೆದ ಏಳು ತಿಂಗಳಿಂದ ಬಾಡಿಗೆ ಹಣವನ್ನು ನೀಡಿಲ್ಲ ಎಂದು ತಿಳಿದು ಬಂದಿದ್ದು, ಹಣವನ್ನು ಕೇಳಲು ಹೋದ ಮಾಲೀಕರಿಗೆ ಆದಿತ್ಯ ಅವರು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಹೀಗಾಗಿ ಮನೆ ಕಾಲಿ ಮಾಡಿಸಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.