ಹಬ್ಬ-ಹರಿದಿನಗಳು ಎಲ್ಲರನ್ನೂ ಒಗ್ಗೂಡಿಸುವಂತಾಗಬೇಕು : ಪಲ್ಲವಿ ರವಿ.

89
firstsuddi

ಚಿಕ್ಕಮಗಳೂರು : ಪ್ರಭು ಏಸುಕ್ರಿಸ್ತನ ಜನ್ಮದಿನದ ಹಿನ್ನೆಲೆಯಲ್ಲಿ ವಾರ್ಷಿಕ ಕ್ರಿಸ್ಮಸ್ ಹಬ್ಬವನ್ನು ಇಲ್ಲಿನ ಕಲ್ಯಾಣನಗರದ ಬೆಥೆಲ್ ಚರ್ಚ್‍ನಲ್ಲಿ ಕ್ರೈಸ್ತ ಸಮುದಾಯದವರು ನಿನ್ನೆ ಸಡಗರ ಸಂಭ್ರಮದಿಂದ ಆಚರಿಸಿದರು.

ಜನ್ಮದಿನದ ಪ್ರಯುಕ್ತ ದೇವಾಲಯದಲ್ಲಿ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ಎಲ್ಲರನ್ನೂ ಒಗ್ಗೂಡಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಸಿಸ್ಟರ್ ಮಂಜುಳ ಮಾತನಾಡಿ ಬೆಥೆಲ್ ಚರ್ಚ್ ಸಮಾಜದಲ್ಲಿ ಭಾವೈಕ್ಯತೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಲೋಕ ಕಲ್ಯಾಣಕ್ಕಾಗಿ ದುಡಿಯುತ್ತಿದೆ ಎಂದು ತಿಳಿಸಿದರು.

ಕ್ರಿಸ್ಮಸ್ ಹಬ್ಬದ ಅಂಗವಾಗಿ ಚರ್ಚ್ ವತಿಯಿಂದ ಬಡವರಿಗೆ ವಸ್ತ್ರದಾನ, ಸಾರ್ವಜನಿಕ ಅನ್ನದಾನ ಮಾಡಲಾಯಿತು. ಸವಿತಾ ಸಮಾಜದ ಮುಖಂಡ ಜೆ.ಸತ್ಯನಾರಾಯಣ, ಫಾದರ್ ರಾಜು ಉಪಸ್ಥಿತರಿದ್ದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.