ಶಿವಮೊಗ್ಗ : ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಸುವರ್ಣ ಅವರು ಭೇಟಿ ನೀಡಿ ಹರ್ಷ ಅವರ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ತಮ್ಮ ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರೂ. ಮೊತ್ತದ ಚೆಕ್ ನೀಡಿ ಈ ಸಂಕಷ್ಟದ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಕುಟುಂಬದ ಜತೆ ನಿಲ್ಲುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹರ್ಷನ ಹತ್ಯೆಯ ಹಿಂದೆ ಜಿಹಾದಿ ಸಂಘಟನೆಯ ಕೈವಾಡ ಇದ್ದು ನಾವು ಅದಕ್ಕೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುವ ಕೆಲಸ ಮಾಡುತ್ತೇವೆ. ಇದು ಹಿಜಾಬ್ ನ ಗಲಾಟೆಯ ಭಾಗವಾಗಿ ಘಟನೆ ನಡೆದಿದ್ದು ಹಿಜಾಬ್ ಗಲಾಟೆಯಲ್ಲೂ ಕೂಡ ಜಿಹಾದಿಗಳ ಹುನ್ನಾರವಿತ್ತು. ಸದ್ಯ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ ಮಗನ ಸ್ಥಾನದಲ್ಲಿ ನಿಂತು ಕುಟುಂಬಕ್ಕೆ ನೆರವಾಗುತ್ತೇವೆ ಎಂದರು.










