ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸರಳ ಟಿಪ್ಸ್…

868
firstsuddi

ನಮ್ಮನ್ನು ಮುಜುಗರಕ್ಕೀಡು ಮಾಡುವ ಕೆಲವು ಸಂಗತಿಗಳಲ್ಲಿ ಹಲ್ಲುಗಳು ಹಳದಿಯಾಗಿರುವುದು ಕೂಡಾ ಒಂದು. ಎಷ್ಟು ಬಾರಿ ಚೆನ್ನಾಗಿ ಉಜ್ಜಿದರು ಕೂಡಾ ಹಲ್ಲುಗಳು ಬಿಳಿಯಾಗುವುದೇ ಇಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ಹಲ್ಲುಗಳನ್ನು ಆಹಾರವನ್ನು ಜಗಿಯಲು ಮಾತ್ರವಲ್ಲದೆ ನಾವು ನಗುವ ಮೂಲಕ ನಮ್ಮ ಹಲ್ಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಲ್ಲುಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಹಲ್ಲುಗಳು ಹಲವಾರು ಕಾರಣಗಳಿಂದ ಹಳದಿಯಾಗುವುದುಂಟು. ಪ್ರಮುಖವಾಗಿ ಧೂಮಪಾಮ, ತಂಬಾಕು ಸೇವನೆ, ಆಲ್ಕೋಹಾಲ್ ಸೇವನೆ ಮಾಡುವವರಲ್ಲಿ ಹೆಚ್ಚಾಗಿ ಈ ಸಮಸ್ಯೆಗಳನ್ನು ಕಾಣಬಹುದು. ಈ ಹಳದಿ ಹಲ್ಲುಗಳ ಸಮಸ್ಯೆಯಿಂದ ದೂರವಾಗಲು ಈ ಕೆಳಕಂಡ ಸರಳ ಮನೆಮದ್ದನ್ನು ಬಳಸಿ ಹಳದಿ ಹಲ್ಲುಗಳಿಂದ ಮುಕ್ತಿ ಪಡೆಯಬಹುದು.

• ಟೂತ್ ಪೇಸ್ಟ್, ನಿಂಬೆ ಹಣ್ಣಿನ ರಸ, ಬೇಕಿಂಗ್ ಸೋಡಾವನ್ನು ಮಿಶ್ರಣ ಮಾಡಿ ಹಲ್ಲು ಉಜ್ಜುವುದರಿಂದ ಹಳದಿ ಹಲ್ಲುಗಳಿಂದ ದೂರವಾಗಬಹುದು.
• ನೀರು, ನಿಂಬೆ ರಸವನ್ನು ಮಿಶ್ರಣ ಮಾಡಿ ಹಲ್ಲಿನ ಮೇಲೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಹಲ್ಲನ್ನು ಉಜ್ಜಬೇಕು. ಇದರಿಂದ ಹಳದಿ ಹಲ್ಲುಗಳನ್ನು ಬಿಳಿಯಾಗಿಸಬಹುದು.
• ಸ್ವಲ್ಪ ಪೇಸ್ಟ್ ಮತ್ತು ಹಾಲಿನ ಪುಡಿ ಮಿಶ್ರಣ ಮಾಡಿ ಹಲ್ಲುಗಳನ್ನು ಉಜ್ಜುವುದರಿಂದ ಹಳದಿ ಹಲ್ಲುಗಳಿಂದ ಮುಕ್ತಿ ಪಡೆಯಬಹುದು.
• ಬೇಕಿಂಗ್ ಸೋಡಾಗೆ ಸ್ವಲ್ಪ ಉಪ್ಪು ಸೇರಿಸಿ ಹಲ್ಲುಗಳನ್ನು ಉಜ್ಜುವುದರಿಂದ ಹಳದಿ ಹಲ್ಲುಗಳಿಂದ ದೂರವಾಗಬಹುದು.
• ಒಣಗಿದ ಕಿತ್ತಲೆ ಸಿಪ್ಪೆ ಪುಡಿಯಿಂದ ಹಲ್ಲು ಉಜ್ಜುವುದರಿಂದ ಹಳದಿ ಹಲ್ಲುಗಳನ್ನು ಬಿಳಿಯಾಗಿಸಬಹುದು.
• ಕಹಿ ಬೇವಿನ ಎಲೆಗಳಿಗೆ ನಿಂಬೆ ರಸ ಸೇರಿಸಿ ಹಲ್ಲು ಉಜ್ಜುವುದರಿಂದ ಹಳದಿ ಹಲ್ಲುಗಳ ಸಮಸ್ಯೆಯಿಂದ ಪಾರಾಗಬಹುದು.
• ಉಪ್ಪು ಮತ್ತು ನಿಂಬೆ ರಸ ಮಿಶ್ರಣವನ್ನು ಮಾಡಿ ಹಲ್ಲು ಉಜ್ಜುವುದರಿಂದ ಈ ಸಮಸ್ಯೆಯಿಂದ ದೂರವಾಗಬಹುದು.
• ಹೆಚ್ಚು ಹಸಿ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ಈ ಹಳದಿ ಹಲ್ಲುಗಳ ಸಮಸ್ಯೆಯನ್ನು ತಡೆಯಬಹುದು.
• ಬೇಕಿಂಗ್ ಸೋಡಾ, ನಿಂಬೆ ರಸ, ಅರಿಶಿಣ ಪುಡಿ ಮಿಶ್ರಣ ಮಾಡಿ ಹಲ್ಲುಗಳನ್ನು ಉಜ್ಜಬೇಕು. ಇದರಿಂದ ಹಳದಿ ಹಲ್ಲುಗಳನ್ನು ಬೆಳ್ಳಗೆ ಮಾಡುತ್ತದೆ.
• ಉಪ್ಪು ಮತ್ತು ಸಾಸಿವೆ ಎಣ್ಣೆ, ಬೇಕಿಂಗ್ ಸೋಡಾವನ್ನು ಮಿಶ್ರಣ ಮಾಡಿ ಹಲ್ಲುಗಳನ್ನು ಉಜ್ಜುವುದರಿಂದ ಹಳದಿ ಹಲ್ಲುಗಳನ್ನು ಬಿಳಿಯಾಗಿಸಬಹುದು.
• ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಇದರಿಂದ ಮೊದಲು ಹಲ್ಲುಗಳನ್ನು ಉಜ್ಜಿ ಬಳಿಕ ಟೂತ್ ಪೇಸ್ಟ್ ನಿಂದ ಹಲ್ಲುಗಳನ್ನು ಉಜ್ಜುವುದರಿಂದ ಹಳದಿ ಹಲ್ಲುಗಳನ್ನು ಹೋಗಲಾಡಿಸುತ್ತದೆ.
• ಅರಿಶಿಣ ಮತ್ತು ಹಾಲನ್ನು ಮಿಶ್ರಣ ಮಾಡಿ ಹಲ್ಲುಗಳನ್ನು ಉಜ್ಜುವುದರಿಂದ ಹಳದಿ ಹಲ್ಲುಗಳನ್ನು ಬಿಳಿಯಾಗಿಸಬಹುದು.