ಹಸೆಮಣೆ ಏರುವ ಮುನ್ನವೇ ಮಸಣ ಸೇರಿದ ಮದುಮಗ…

73
firstsuddi

ಕೊಡಗು : ಹಸೆಮಣೆ ಏರುವ ಮುನ್ನವೇ ಮದುಮಗ ಮಸಣ ಸೇರಿರುವ ಘಟನೆ ಜಿಲ್ಲೆಯ ಮಡಿಕೇರಿ ಹೊರ ವಲಯದ ಸಂಪಿಗೆ ಕಟ್ಟೆ ಬಳಿ ನಡೆದಿದೆ. ನಿನ್ನೆ ರಾತ್ರಿ ಬುಲೆಟ್ ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಮೈಸೂರಿನ ವಿಶ್ವನಾಥ್ (32), ಅತ್ತಿಗೋಡಿನ ದಿನೇಶ್(23) ಮೃತ ದುರ್ದೈವಿಗಳು. ವಿಶ್ವನಾಥ್ ಇತ್ತೀಚೆಗೆ ಎಲ್ ಎಲ್ ಬಿ ಮುಗಿಸಿ ಪ್ರಾಕ್ಟೀಸ್ ಆರಂಭಿಸಿದ್ದರು.

ಸೆಪ್ಟೆಂಬರ್ 19 ರಂದು ವಿವಾಹ ಇದ್ದಿದ್ದರಿಂದ ಆಹ್ವಾನ ಪತ್ರಿಕೆ ನೀಡಲು ಮಡಿಕೇರಿಗೆ ವಿಶ್ವನಾಥ್ ಹಾಗೂ ದಿನೇಶ್ ಇಬ್ಬರು ಬೈಕ್ ನಲ್ಲಿ ಬಂದಿದ್ದಾರೆ. ಲಗ್ನ ಪತ್ರಿಕೆ ಕೊಟ್ಟು ವಾಪಸ್ ಮೈಸೂರಿಗೆ ಬರುವಾಗ ಮಡಿಕೇರಿ ಸಮೀಪದಲ್ಲಿ ಟಿಪ್ಪರ್ ಬಂದು ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕೆ ನಗರ ಸಂಚಾರಿ ಪೊಲೀಸರು ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.