ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಹಾಟ್ ಬಿಕಿನಿ ತೊಟ್ಟು ಮಾದಕವಾಗಿ ಪೋಸ್ ಕೊಟ್ಟಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇತ್ತಿಚೀನ ದಿನಗಳಲ್ಲಿ ಹಲವು ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಸಿನಿಮಾ ಸ್ಟಾರ್ ಗಳು ಮಾಲ್ಡೀವ್ಸ್ ಪ್ರವಾಸವನ್ನು ಹೆಚ್ಚು ಮಾಡುತ್ತಿದ್ದಾರೆ. ಕಡಲ ಕಿನಾರೆಯಲ್ಲಿ ನಿಂತು ಪೋಸ್ ಕೊಟ್ಟು ಫೊಟೋವನ್ನು ಶೇರ್ ಮಾಡುತ್ತಿದ್ದರು. ಈಗ ಜಾಹ್ನವಿ ಕೂಡಾ ಸ್ವಿಮ್ ಸೂಟ್ ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟು ಮಾಲ್ಡೀವ್ಸ್ ನ ನೀಲಾಕಾಶದ ಕಿನಾರೆಯಲ್ಲಿ ನಿಂತು ಸಖತ್ ಹಾಟ್ ಆಗಿರುವ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ.










