ಹಾವಿನೊಂದಿಗೆ ಚೆಲ್ಲಾಟ – ಐದಕ್ಕೂ ಹೆಚ್ಚು ಬಾರಿ ಕಚ್ಚಿಸಿಕೊಂಡು ಸಾವನ್ನಪ್ಪಿದ ವೃದ್ಧ…

66
firstsuddi

ಯಾದಗಿರಿ : ನಾಗರಹಾವಿನೊಂದಿಗೆ ಚೆಲ್ಲಾಟವಾಡಿ ಅದೇ ಹಾವಿನಿಂದ ಐದಕ್ಕೂ ಹೆಚ್ಚು ಬಾರಿ ಕಚ್ಚಿಸಿಕೊಂಡು, ವೃದ್ಧನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ.

ಬಸವರಾಜ್ ಪೂಜಾರಿ ಮೃತ ವ್ಯಕ್ತಿ. ಮನೆಯೊಳಗೆ ನುಗ್ಗುತ್ತಿದ್ದ 6 ಅಡಿ ಉದ್ದವಿದ್ದ ನಾಗರಹಾವನ್ನು ಹಿಡಿಯಲು ಬಸವರಾಜ್ ಮುಂದಾಗಿದ್ದರು. ಹಿಡಿದ ಬಳಿಕ ಅದರ ಜೊತೆ ಕೆಲ ಹೊತ್ತು ಚೆಲ್ಲಾಟವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾವು 5ಕ್ಕೂ ಹೆಚ್ಚು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿ ತಾನು ಸಹ ಸಾವನ್ನಪ್ಪಿದೆ.

ಮೃತಪಟ್ಟ ಬಸವರಾಜ್ ಇದುವರೆಗೆ 300 ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದರು. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.