ಹಾಸನ : ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ಮೂವರು ಸಾವು…

306
firstsuddi

ಹಾಸನ : ಮನೆ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಗಸರಹಳ್ಳಿಯಲ್ಲಿ ನಡೆದಿದೆ. ಭಾಗ್ಯಮ್ಮ(50), ದಾಕ್ಷಾಯಿಣಿ(30) ಹಾಗೂ ದಯಾನಂದ(40) ಮೃತ ದುರ್ದೈವಿಗಳು ಎನ್ನಲಾಗಿದ್ದು, ದಾಕ್ಷಾಯಿಣಿ ಎಂಬುವವರು ಬೆಳಿಗ್ಗೆ ಬಟ್ಟೆ ಒಣ ಹಾಕಲು ತೆರಳಿದ್ದ ವೇಳೆ ವಿದ್ಯುತ್ ತಂತಿ ಮೇಲೆ ಕಾಲಿಟ್ಟಿದ್ದು, ಈ ವೇಳೆ ದಾಕ್ಷಾಯಿಣಿ ಅವರನ್ನು ದಯಾನಂದ ಹಾಗೂ ಭಾಗ್ಯಮ್ಮ ಅವರು ರಕ್ಷಿಸಲು ಹೋದ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದ್ದು, ಘಟನೆಯಲ್ಲಿ ಮಗು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.