ಹೈದರಾಬಾದ್ : ತೆಲುಗು ಸಿನಿಮಾ ರಂಗದ ಮಹಿಳಾ ನಿರ್ದೇಶಕಿ, ಹಿರಿಯ ನಟಿ ಹಾಗೂ ನಿರ್ಮಾಪಕಿಯಾದ ಜಿ.ವಿಜಯಾ ನಿರ್ಮಲಾ(73) ಅವರು ಇಂದು ನಿಧನರಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಗಚಿಬೌಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ವಿಜಯಾ ನಿರ್ಮಲಾ ಅವರು ತೆಲುಗು ಚಿತ್ರರಂಗಕ್ಕೆ ಬಾಲನಟಿಯಾಗಿ ಪ್ರವೇಶಿಸಿದ್ದು, ಇವರು ಮಲಯಾಳಂ, ತಮಿಳು ಹಾಗೂ ತೆಲುಗು ಸೇರಿದಂತೆ 44 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಇವರಿಗೆ ಅತೀ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ದೊರಕಿತ್ತು. ವಿಜಯಾ ಅವರಿಗೆ 2008ರಲ್ಲಿ ರಘುಪತಿ ವೆಂಕಯ್ಯ ಎಂಬ ಪ್ರಶಸ್ತಿ ಲಭಿಸಿದೆ.










