ಹೆಚ್‍ಡಿಕೆ ಅವರು 14 ತಿಂಗಳು ಯಾವ ರೀತಿ ಅಧಿಕಾರ ಮಾಡಿದ್ದರು ಎಂದು ತಾಯಿ ಚಾಮುಂಡೇಶ್ವರಿ ಮುಂದೆ ನಿಂತು ಯೋಚನೆ ಮಾಡಲಿ : ವಿ. ಸೋಮಣ್ಣ.

318
firstsuddi

ಮೈಸೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರು 14 ತಿಂಗಳು ಯಾವ ರೀತಿ ಅಧಿಕಾರ ಮಾಡಿದ್ದರು ಎಂದು ತಾಯಿ ಚಾಮುಂಡೇಶ್ವರಿ ಮುಂದೆ ನಿಂತು ಯೋಚನೆ ಮಾಡಲಿ. ಯಾರೂ ಯಾರಿಗೂ ದೊಡ್ಡವರಲ್ಲ. ನಾನು ಎಲ್‍ಬೋರ್ಡ್ ಅಲ್ಲ ಹಲವು ಕಾರ್ಯಕ್ರಮ ಮಾಡಿದ ಅನುಭವ ನನಗಿದೆ. ಅಲ್ಲದೇ ಈ ಹಿಂದೆ ದಸರಾ ಉತ್ಸವ ನಡೆಸಿದ ನಾಯಕರ ಸಲಹೆಯನ್ನು ಪಡೆಯುತ್ತೇನೆ. ಒಂದು ವೇಳೆ ಕುಮಾರಸ್ವಾಮಿ ಅವರು ನನಗೆ ಸಲಹೆ ನೀಡುವುದಾದರೆ ನೀಡಲಿ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನೆರೆ ಪೀಡಿತ ಪ್ರದೇಶಗಳಿಗೆ ಯುವಕರಂತೆ ಸುತ್ತಾಡುತ್ತಿದ್ದಾರೆ. ಅವರೊಂದಿಗೆ ನಾವು ಕೂಡಾ ಹೋಗಿ ಸಂತ್ರಸ್ಥರ ಕಷ್ಟಗಳನ್ನು ಆಲಿಸುತ್ತಿದ್ದೇವೆ. ಕುಮಾರಸ್ವಾಮಿ ಅವರು ಕೂಡಾ 2 ಬಾರಿ ಸಿಎಂ ಆಗಿದ್ದರು. ಅವರ ಕಾರ್ಯ ವೈಖರಿ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರು ಅದೃಷ್ಟದಿಂದ ಮುಖ್ಯಮಂತ್ರಿಯಾದವರು. ಅದೃಷ್ಟ ಯಾರ ಮನೆಯ ಸ್ವತ್ತು ಅಲ್ಲ. ಅವರಿಗೆ ಅದೃಷ್ಟ ಇತ್ತು ಮುಖ್ಯಮಂತ್ರಿಯಾದರು ನಾನು ಮಂತ್ರಿಯಾದೆ ಅಷ್ಟೇ ಎಂದು ಹೇಳಿದರು.