ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಡ್ ಕೊರತೆಯಾಗಿಲ್ಲ : ಸುಧಾಕರ್ ಸ್ಪಷ್ಟನೆ…

114
firstsuddi

ಬೆಂಗಳೂರು : ಕೊರೊನಾ ಸೋಂಕಿಗೆ ತುತ್ತಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಿಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು, ಕುಮಾರಸ್ವಾಮಿಯವರಿಗೆ ಹೃದಯದ ಸರ್ಜರಿಯಾಗಿರುವುದರಿಂದ ಅಪೋಲೊ ಆಸ್ಪತ್ರೆಯಲ್ಲಿ ಸಂಬಂಧಪಟ್ಡ ವೈದ್ಯರು ಇದ್ದಾರೆ. ಹೀಗಾಗಿ ಅವರೇ ಮಣಿಪಾಲ್ ಆಸ್ಪತ್ರೆ ಬಿಟ್ಟು ಅಪೋಲೋಗೆ ಹೋಗಿರುವುದಾಗಿ ಹೇಳಿದ್ದಾರೆ. ಅಲ್ಲಿ ಬೆಡ್ ವ್ಯವಸ್ಥೆ ಇರುವ ಬಗ್ಗೆ ನಾನೇ ಖುದ್ದಾಗಿ ಹೇಳಿದ್ದೇನೆ. ಅವರಿಗೆ ಈಗಲೂ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿದೆ. ಅನಗತ್ಯವಾಗಿ ಯಾರೂ ಸಹ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬಾರದು. ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.