ಹೆಣ್ಣು ನಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು…

729
firstsuddi

ಆಗ್ರಾ : ಹೆಣ್ಣು ನಾಯಿಯನ್ನು ಕಿಡ್ನಾಪ್ ಮಾಡಿ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್11, 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ದಿನೇಶ್ ಕುಮಾರ್, ಸತೀಶ್ ಮತ್ತು ಅಶೋಕ್ ಎಂದು ಗುರುತಿಸಲಾಗಿದ್ದು, ಇವರು ನಾಯಿಯ ಮಾಲಿಕ ಸಂತೋಷ್‍ದೇವಿ ಅವರ ಕುಟುಂಬಕ್ಕೆ ಹತ್ತಿರವಾದವರು ಎಂದು ತಿಳಿದು ಬಂದಿದ್ದು, ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಪೊಮೇರಿಯನ್ ನಾಯಿಗೆ ಮೊಟ್ಟೆಯ ಆಸೆ ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತೋಷ್‍ದೇವಿ ಅವರು ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಕೆನಿನ್ ಎಂಬ ನಾಯಿಯನ್ನು ಮನೆಯ ಮಾಲಿಕರು ಹುಡುಕಾಟ ನಡೆಸಿದಾಗ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಇದ್ದ ನಾಯಿ ಆರೋಪಿ ದಿನೇಶ್ ಮನೆಯಲ್ಲಿ ಕಂಡುಬಂದಿತ್ತು. ಕೆನಿನ್ ನಾಯಿ ಲೈಂಗಿಕ ದೌರ್ಜನ್ಯದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮಾಲಿಕರು ನಾಯಿಗೆ ವೈದ್ಯಕೀಯ ತಪಾಸಣೆ ನಡೆಸಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.