ಹೆತ್ತ ಮಗನನ್ನೇ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಿದ ತಂದೆ-ತಾಯಿ!

358
firstsuddi

ತೆಲಂಗಾಣ : ಹೆತ್ತ ತಂದೆ ತಾಯಿಯೇ ಮಗನನ್ನು ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಿರುವ ಘಟನೆ ವರಂಗಲ್ ರೂರಲ್ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ. ಮಹೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಮಹೇಶ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಆದರೆ ಮಹೇಶ್ ಅವರು ಮಧ್ಯ ವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಸೇರಿಕೊಂಡಿದ್ದರು. ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್ ಅವರು ತಮ್ಮ ತಂದೆ ತಾಯಿಯೊಂದಿಗೆ ಪ್ರತಿದಿನ ಜಗಳ ಮಾಡುತ್ತಿದ್ದರು. ಮಗನ ಕಿರುಕುಳದಿಂದ ಬೇಸತ್ತ ತಂದೆ-ತಾಯಿ ಮಹೇಶ್ ಅವರನ್ನು ಕಟ್ಟಿ ಹಾಕಿ ಸೀಮೆ ಎಣ್ಣೆ ಸುರಿದು ಸಜೀವ ದಹನ ಮಾಡಿದ್ದಾರೆ. ಈ ಕುರಿತು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.