‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸದಾ ಆ್ಯಕ್ಟೀವ್ ಆಗಿರುವ ಸೋನು ಈಗ 1 ಮಿಲಿಯನ್ ಫಾಲೋವರ್ಸ್ ರೀಚ್ ಆಗಿದ್ದಾರೆ. ಈ ಖುಷಿಯಲ್ಲಿ ನಟಿ ಮತ್ತೊಂದು ಬೋಲ್ಡ್ ಬಿಕಿನಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಸದಾ ಒಂದಲ್ಲಾ ಒಂದು ಪೋಸ್ಟ್, ವೀಡಿಯೋ ಮೂಲಕ ಸದ್ದು ಮಾಡ್ತಿದ್ದ ನಟಿ ಟ್ರೋಲ್‌ನಿಂದ ಕೂಡ ಫೇಮಸ್ ಆಗಿದ್ದರು. ಈಗ ಸೋನುಗೆ 1 ಮಿಲಿಯನ್ ಫಾಲೋವರ್ಸ್ ಸಂಖ್ಯೆ ತಲುಪಿದೆ. ಇದೇ ಸಂಭ್ರಮದಲ್ಲಿ ಸೋನು, ಬಿಕಿನಿ ವೀಡಿಯೋ ಶೇರ್ ಮಾಡಿದ್ದಾರೆ.
ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು.
ಬಿಕಿನಿ ವೀಡಿಯೋ ಹಂಚಿಕೊಂಡಿರುವ ಸೋನು, ‘ಇದು ಒಂದು ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಕ್ಕೆ’ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ.










