1ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಮೌಲ್ಯಾಂಕನದ ಮೂಲಕ ಪಾಸ್..!

121
firstsuddi

ಬೆಂಗಳೂರು : ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ 1ರಿಂದ 9ನೇ ತರಗತಿಯವರೆಗೆ ಪರೀಕ್ಷೆ ಇಲ್ಲದೇ ವಿಶ್ಲೇಷಣಾ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಕ್ರಿಯಾ ಶೀಲತೆ ಪರಿಗಣಿಸಿ ಪಾಸ್ ಮಾಡಲು ಆದೇಶಿಸಲಾಗಿದೆ. ಕೊರೊನಾ ಹೆಚ್ಚಳ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಇನ್ನೂ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.1ರಿಂದ ಜೂನ್.14ರವರೆಗೆ ಬೇಸಿಗೆ ರಜೆ ಘೋಷಿಸಿದ್ದು, 2021-22 ಸಾಲಿನ ಶೈಕ್ಷಣಿಕ ಸಾಲಿನ ವರ್ಷ ಜೂನ್.15ರಿಂದ ಆರಂಭವಾಗುತ್ತದೆ. ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ.