ಬಳ್ಳಾರಿ: ಬಾರೆಹಣ್ಣಿನ ಬೀಜ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಮಗುವೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೀರಲಗುಡ್ಡ ಗ್ರಾಮದಲ್ಲಿ ನಿನ್ನೆ ನಡೆದಿದೆ. ಶರತ್ 2 ವರ್ಷದ ಮೃತಪಟ್ಟ ಮಗು. ಮಗುವಿಗೆ ಪೋಷಕರು ಬಾರೆಹಣ್ಣನ್ನು ಬೀಜ ತೆಗೆಯದ ತಿನ್ನಲು ಕೊಟ್ಟಿದ್ದಾರೆ. ಹಣ್ಣನ್ನು ತಿನ್ನುತ್ತಿದ್ದ ಮಗುವಿನ ಗಂಟಲಿಗೆ ಹಣ್ಣಿನ ಬೀಜ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯದಿದ್ದಾರೆ ಅಷ್ಟರಲ್ಲಿ ಮಗು ಮೃತಪಟ್ಟಿದೆ.










