2023ರಲ್ಲೂ ಬೊಮ್ಮಾಯಿ ಅವರೇ ದಸರಾ ಉದ್ಘಾಟಿಸಲಿದ್ದಾರೆ : ಪ್ರತಾಪ್ ಸಿಂಹ ಭವಿಷ್ಯ…

84
firstsuddi

ಮೈಸೂರು : ಮೈಸೂರು ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, 2023ರಲ್ಲೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಸರಾ ಉದ್ಘಾಟಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಎಸ್.ಎಂ. ಕೃಷ್ಣ ಅವರಂಥ ಯೋಗ್ಯ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಕರೆಸಿದ ಸಿಎಂ ಬೊಮ್ಮಾಯಿ ಅವರಿಗೆ ವಂದನೆ. ಎಸ್.ಎಂ. ಕೃಷ್ಣ ಅವರು ದೂರದರ್ಶಿತ್ವ ಇದ್ದ ಮಹಾ ಆಡಳಿತಗಾರ ಆಗಿದ್ದರು. ಆಡಳಿತದಲ್ಲಿ ಆರ್ಥಿಕ ಶಿಸ್ತು ತಂದ ಕೀರ್ತಿ ಅವರಿಗೆ ಮೊದಲು ಸಲ್ಲುತ್ತದೆ ಎಂದರು.

ಲಿಕ್ಕರ್​​ನಿಂದ  ಬರುತ್ತಿರುವ ಲಾಭಕ್ಕೆ ಅಂದು ಎಸ್.ಎಂ ಕೃಷ್ಣ ಅವರು ತಂದ ಯೋಜನೆಗಳು ಕಾರಣ. ಖಾತೆ, ಪಹಣಿಯಿಂದ ಹಿಡಿದು ಎಲ್ಲಾ ಸರ್ಕಾರಿ ದಾಖಲೆಗಳನ್ನು ಗಣಕೀಕರಣ ಮಾಡಿದ ಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ಎಸ್.ಎಂ. ಕೃಷ್ಣ ಅವರ ಹಾದಿಯಲ್ಲೇ ಬೊಮ್ಮಾಯಿ ಸಾಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. 2023ರಲ್ಲೂ ಬೊಮ್ಮಾಯಿ ಅವರೆ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ ಎಂದರು.