3 ಈಡಿಯೆಟ್ಸ್ ಖ್ಯಾತಿಯ ಅಖಿಲ್ ಮಿಶ್ರಾ ನಿಧನ…

69
firstsuddi

3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ಅಖಿಲ್ ಮಿಶ್ರಾ ಇಂದು ನಿಧನರಾಗಿದ್ದಾರೆ.

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಖಿಲ್ ಮಿಶ್ರಾ ಪತ್ನಿ ಸುಝೇನ್ ಬರ್ನರ್ಟ್ ತಿಳಿಸಿದ್ದಾರೆ.

ನಟ ಅಖಿಲ್‌ಗೆ ರಕ್ತದ ಒತ್ತಡದ ಸಮಸ್ಯೆಯಿತ್ತು. ಮನೆಯಲ್ಲಿ ಬಿದ್ದು ತೀವ್ರ ಗಾಯಗಳಾಗಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕುರ್ಚಿಯ ಮೇಲಿಂದ ಬಿದ್ದು ತಲೆ, ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ ಸಾವನ್ನಪ್ಪಿದ್ದಾರೆ. ಮಿಶ್ರಾ ನಿಧನರಾದಾಗ ಅವರ ಪತ್ನಿ ಸುಝೇನ್ ಬರ್ನರ್ಟ್ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿದ್ದರು.

3 ಈಡಿಯೆಟ್ಸ್’ ಸಿನಿಮಾದಲ್ಲಿ ಅಖಿಲ್ ಮಿಶ್ರಾ ನಟಿಸಿದ ಪಾತ್ರ ಚಿಕ್ಕದಾಗಿದ್ದರೂ ಪ್ರೇಕ್ಷಕರ ಗಮನ ಸೆಳೆದಿತ್ತು. ಮಿಶ್ರಾ ಅವರು ಹೆಚ್ಚಾಗಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದರು.