70ನೇ ವಸಂತಕ್ಕೆ ಕಾಲಿಟ್ಟ ತಲೈವಾ-ಪ್ರಧಾನಿ ಮೋದಿ ಅವರಿಂದ ಶುಭಾಶಯ…

121
firstsuddi

ಚೆನ್ನೈ : ಕಾಲಿವುಡ್‍ನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು 70ನೇ ವರ್ಷದ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಇಂದು ತಮಿಳುನಾಡಿನ ತಲೈವಾ ಎಂದೇ ಖ್ಯಾತಿ ಪಡೆದ ರಜನಿ ಕಾಂತ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗದವರು, ಅಭಿಮಾನಿಗಳು ಹಾಗೂ ಹಲವಾರು ರಾಜಕೀಯ ನಾಯಕರುಗಳು ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ತಮ್ಮ ಟ್ವಿಟರ್ ಖಾತೆ ಮೂಲಕ ರಜನಿಕಾಂತ್ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು ನೀವು ದೀರ್ಘಕಾಲದ ವರೆಗೆ ಆರೋಗ್ಯವಾಗಿರಿ ಎಂದು ಬರೆದುಕೊಂಡಿದ್ದಾರೆ.
ಸಚಿವ ಶ್ರೀರಾಮುಲು ಅವರು, ಕನ್ನಡ ನಾಡಿನ ಮಗನೊಬ್ಬ ಇಂದು ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ವರ್ಗವನ್ನೇ ಸಂಪಾದಿಸಿರುವ ಜನಪ್ರಿಯ ನಟ. ಸಾಧನೆ ಶಿಖರವೇರಿ, ಸಾಧನೆಯ ಹಸಿವಿರುವವರಿಗೆ ಮಾದರಿಯಾಗಿ ನಿಂತ ನಟ ಶ್ರೀ ರಜನಿಕಾಂತ್ ರವರ ಜನ್ಮದಿನವಿಂದು. ಸಿನಿಮಾ ಅಷ್ಟೇ ಅಲ್ಲದೇ ಜನಸೇವೆಯಲ್ಲೂ ತೊಡಗಿರುವ ನಿಜವಾದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದ್ದಾರೆ.