80 ವರ್ಷದ ವೃದ್ಧೆ ಮೇಲೆ ಅತ್ಯಾಚಾರ!

79
firstsuddi

ಲಕ್ನೋ : 80 ವರ್ಷದ ವೃದ್ಧೆ ಮೇಲೆ ಸಂಬಂಧಿಕನೇ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಬುದೌನ್ ನಲ್ಲಿ ನಡೆದಿದೆ. ಆಗಸ್ಟ್ 1ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ವೃದ್ಧೆಯನ್ನು ಮನೆಗೆ ಊಟಕ್ಕೆ ಬರುವಂತೆ ಹೇಳಿ ಕರೆದುಕೊಂಡು ಹೋಗಿದ್ದನು. ಈ ವೇಳೆ ಕಂಠಪೂರ್ತಿಯಾಗಿ ಕುಡಿದು ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಸಂಬಂಧಿಕರು ಬಂದ ತಕ್ಷಣ ನಡೆದಿರುವ ಘಟನೆಯನ್ನು ವೃದ್ಧೆ ಹೇಳಿದ್ದು, ಈ ಬಗ್ಗೆ ವಾಜಿರ್ ಗಂಜ್ ಪೊಲೀಸ್ ಠಾಣೆಯಲ್ಲಿ ತಕ್ಷಣ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಘಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.