ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಐಟಿ ದಾಳಿ ವೇಳೆ ಸಂಬಂಧಿಗಳು ಮತ್ತು ಆಪ್ತರ ಮನೆಗಳಲ್ಲಿ ಅಪಾರ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿದಂತೆ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದು ದ್ವೇಷದ ರಾಜಕಾರಣವೆಂದು ನಾನು ಆರೋಪ ಮಾಡುವುದಿಲ್ಲ. ಯಾರ ವಿರುದ್ಧವೂ ನಾನು ಮಾತನಾಡುವುದಿಲ್ಲ. ನೋಟಿಸ್ ಬಗ್ಗೆ ಅವರೇ ಉತ್ತರಿಸುತ್ತಾರೆ ಎಂದಿದ್ದಾರೆ.










