ಚಿಕ್ಕಮಗಳೂರು : ಶಾಲೆಯ ಮಕ್ಕಳು ತಮ್ಮ ಒಳಗಿರುವ ಪ್ರತಿಭೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೊರಹಾಕಲು ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ತುಂಬ ಸಹಕಾರಿ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ವೆಂಕಟರಾಮು ಹೇಳಿದರು.ಅವರಿಂದು ನಗರದ ಹೌಸಿಂಗ್ ಬೋರ್ಡ್‍ನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶ್ರೀ ಮಂಜುನಾಥೇಶ್ವರ ವಿದ್ಯಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಿರಿಯ-ಕಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಓದು ಬರಹ ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಕ್ಕಳ ಪ್ರತಿಭೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಇಂತಹ ಕಾರ್ಯಕ್ರಮಗಳ ವೇದಿಕೆಯಲ್ಲಿ ಪ್ರದರ್ಶನ ಮಾಡಿ ಹೊರ ಜಗತಿಗೆ ತೋರಿಸಬಹುದು. ಪ್ರತಿಭಾಕಾರಂಜಿ ಎಂಬುದು ಶಿಕ್ಷಣದ ಒಂದು ಭಾಗವಾಗಿದ್ದು ಇದು ಬೌಧಿಕ ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರಲ್ಲು ಒಂದೊಂದು ಪ್ರತಿಭೆಗಳಿರುತ್ತವೆ. ಸಂಗೀತ, ನೃತ್ಯ, ಅಭಿನಯ ಹೀಗೆ ನಾನಾ ವಿಷಯಗಳಲ್ಲಿ ಮಕ್ಕಳು ಚತುರಥೆ ಹೊಂದಿರುತ್ತಾರೆ. ಎಷ್ಟೋ ವಿಧ್ಯಾರ್ಥಿಗಳು ಅವಕಾಶ ವಂಚಿತರಾಗಿರುತ್ತಾರೆ. ಕೆಲವೊಮ್ಮೆ ಸರಿಯಾದ ವೇದಿಕೆ ಸಿಕ್ಕಿರುವುದಿಲ್ಲ ಕೆಲವರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಿರುವುದಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ವಿಧ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ತಮ್ಮಗೆ ಸಿಕ್ಕ ಅವಕಾಶ ಮತ್ತು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಲಬಾರದು ಎಂದು ಅವರು ವಿಧ್ಯಾರ್ಥಿಗಳೀಗೆ ಸಲಹೆ ನೀಡಿದ್ದರು.
ಇಂದು ಜಗತ್ತು ಸಾಕಷ್ಟು ಮುಂದುವರೆದಿದೆ. ತಾವು ಪ್ರತಿ ನಿತ್ಯ ಮಾಧ್ಯಮಗಳಲ್ಲಿ, ಟಿ.ವಿ ಗಳಲ್ಲಿ ಮಕ್ಕಳ ಚಟುವಟಿಕೆಗಳನ್ನು ನೋಡುತ್ತಿರುತ್ತೇವೆ. ನಮ್ಮ ರಾಜ್ಯ ಸಾಂಸ್ಕೃತಿಕ ರಂಗದಲ್ಲಿ ಮುಂಚುಣಿಯಲಿದ್ದು ಇದಕ್ಕೆ ಮಕ್ಕಳ ಚಟುವಟಿಕೆಗಳು ಪ್ರಮುಖ ಕಾರಣ. ಶಾಲೆಯ ಪಾಠದ ಜೊತೆಗೆ ತಮ್ಮಗೆ ಇರುವ ಉತ್ತಮ ಹವ್ಯಾಸ, ಕ್ರೀಡೆ, ಸಾಂಸ್ಕ್ರುತಿಕ ಹವ್ಯಾಸಗಳನ್ನು ಕಲಿಕೆಯೊಂದಿಗೆ ಹೊರ ಜನರೀಗೆ ತೋರಿಸಿ ಅದರಲ್ಲಿ ಬೆಳೆಯುತ್ತ ಹೋದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದ್ದರು. ಇದೇ ಸಂದರ್ಭದಲ್ಲಿ ಇನ್ನು ಹಲವು ಗಣ್ಯರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೀವನ್ ಪ್ರಾರ್ಥನ ಗೀತೆ ಹಾಡಿದ್ದರು. ಮುಖ್ಯ ಶಿಕ್ಷಕರಾದ ಸಿ.ಆರ್ ಚಂದ್ರಶೇಖರ್ ಎಲ್ಲರನ್ನು ಸ್ವಾಗತಿಸಿದ್ದರು.ಗೈಡ್ಸ್ ವಿಧ್ಯಾರ್ಥಿನಿಯರು ನಾಡಗೀತೆ ಹಾಡಿದ್ದರು. ಪ್ರಾಸ್ಥವಿಕ ನುಡಿಯನ್ನು ತಿಮ್ಮಪ್ಪ ಹೇಳಿದ್ದರು. ಸಹ ಶಿಕ್ಷಕಿ ಪಲ್ಲವಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.ಮುಖ್ಯ ಅತಿಥಿಗಳಾಗಿ. ಜಯದೇವ್ ಎ.ಐ.ಟಿ ಪ್ರಾಂಶುಪಾಲರು, ಜಯರಾಮ್. ಮುಖ್ಯ ಶಿಕ್ಷಕರಾದ ಸಿ.ಆರ್. ಚಂದ್ರಶೇಖರ್ ಹಾಗು ವಿವಿಧ ಶಾಲೆಯ ಮಕ್ಕಳು, ಪೋಷಕರು ಭಾಗವಹಿಸಿದ್ದರು.
Home ಸ್ಥಳಿಯ ಸುದ್ದಿ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ಬೌಧಿಕ ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ:ಶ್ರೀ ವೆಂಕಟರಾಮು…










