ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಕೃಷಿಗದ್ದೆಯಲ್ಲಿ ಕಡವೆಯೊಂದು ಪ್ರತ್ಯಕ್ಷ …

258

ಮೂಡಿಗೆರೆ :ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಕೃಷಿ ಗದ್ದೆಯಲ್ಲಿ ಕಡವೆಯೊಂದು ಪ್ರತ್ಯಕ್ಷವಾದ ಘಟನೆ ಮಧ್ಯಾಹ್ನ ನಡೆದಿದ್ದು, ಕಡವೆಯೂ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಗದ್ದೆಗೆ ಜಿಗಿದಿದೆ. ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಪೂರ್ಣೇಶ್ ಅವರಿಗೆ ವಿಷಯ ತಿಳಿಸಿದ್ದು, ನಂತರ ಅರಣ್ಯ ಸಿಬ್ಬಂದಿ ಪೂರ್ಣೇಶ್ ಅವರು ಸ್ಥಳಕ್ಕೆ ಬಂದು ಕಡವೆಯನ್ನು ನಾಯಿಯ ದಾಳಿಯಿಂದ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.