ಮಂಡ್ಯ: ಖಾಸಗಿ ಬಸ್ಸೊಂದು ನಾಲೆಗೆ ಉರುಳಿ ಮಕ್ಕಳು ಸೇರಿದಂತೆ 22ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಪಾಂಡವಪುರದ ಕನಗನಮರಡಿ ಬಳಿ ನಡೆದಿದೆ. ಬಸ್‍ನಲ್ಲಿ 30ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, 22ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು , ಹಲವಾರು ಗಂಭೀರ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಒಬ್ಬ ಯುವಕ ಹಾಗೂ ಒಬ್ಬ ಬಾಲಕ ಅದೃಷ್ಟವಶಾತ್ ಬಚಾವ್ ಆಗಿ ಬಂದಿದ್ದಾರೆ. ಬದುಕಿ ಬಂದಿರುವ ಗಿರೀಶ್ ಎಂಬಾತ ಕಿಟಕಿ ಗಾಜು ಹೊಡೆದು ಹೊರ ಬಂದು ನಂತರ ಏಳನೇ ತರಗತಿ ವಿದ್ಯಾರ್ಥಿ ರೋಹಿತ್ ಎಂಬ ಬಾಲಕನನ್ನು ಬದುಕಿಸಿದ್ದಾರೆ.










