ಬೆಂಗಳೂರು: ಶನಿವಾರ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ನಟ ದರ್ಶನ್ ಅವರು ಸ್ವೀಡನ್ ನಿಂದ ಇದೀಗ ಬೆಂಗಳೂರಿಗೆ ಆಗಮಿಸಿದ್ದು, ಯಜಮಾನ ಚಿತ್ರದ ಶೂಟಿಂಗ್ ಗಾಗಿ ದರ್ಶನ್ ಅವರು ಕಳೆದ ವಾರ ಸ್ವೀಡನ್ ಗೆ ತೆರಳಿದ್ದರು. ಅಂಬರೀಶ್ ನಿಧನ ಸುದ್ದಿ ಕೇಳಿದ ಕೂಡಲೇ ಸ್ಪೀಡನ್ ನಲ್ಲಿ ನಡೆಯುತ್ತಿದ್ದ ಯಜಮಾನ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ತಕ್ಷಣ ಬೆಂಗಳೂರಿಗೆ ಹೊರಟಿದ್ದಾರೆ. ದರ್ಶನ್ ಅವರು ಏರ್‌ಪೋರ್ಟ್‌ನಿಂದ ನೇರವಾಗಿ ಕಂಠೀರವ ಸ್ಟೇಡಿಯಂ ಕಡೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.










