ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಮಾವಿನಹಳ್ಳದ ಭದ್ರಾ ಹಿನ್ನೀರಿನಲ್ಲಿ ಗರ್ಭ ಧರಿಸಿದ ಕಾಡಾನೆಯೊಂದು ನೀರು ಕುಡಿಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದೆ. ನೀರಿನಲ್ಲಿ ತೇಲುತ್ತಿದ್ದ ಕಾಡಾನೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ಮೇಲೆತ್ತಿದ್ದು, ವೈದ್ಯರು ಶವ ಪರೀಕ್ಷೆ ನಡೆಸಿದ್ದಾರೆ.










