ಡೆತ್ ನೋಟ್ ಬರೆದಿಟ್ಟು ಪ್ರೇಮಿಗಳು ನೇಣಿಗೆ ಶರಣು…

291
firstsuddi

ಮೈಸೂರು: ಡೆತ್ ನೋಟ್ ಬರೆದಿಟ್ಟು ಪ್ರೇಮಿಗಳಿಬ್ಬರು ಮರವೊಂದಕ್ಕೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನಡೆದಿದೆ.ತಾಲೂಕಿನ ನಾಗನಹಳ್ಳಿ ದೊಡ್ಡೇಗೌಡನಕೊಪ್ಪಲು ಗ್ರಾಮದ ನಿವಾಸಿಯಾದ ಪಿಯುಸಿ ವಿದ್ಯಾರ್ಥಿನಿ ವೀಣಾ ಹಾಗೂ ಸ್ವಾಮಿ ಆತ್ಮಹತ್ಯೆಗೆ ಶರಣಾಗಿರುವ ಪ್ರೇಮಿಗಳು ಎನ್ನಲಾಗಿದ್ದು, ಡೆತ್ ನೋಟ್ ನಲ್ಲಿ ನಮ್ಮ ಸಾವಿನ ಬಗ್ಗೆ ಚಿಂತಿಸಬೇಡಿ.ನಮ್ಮ ಎರಡು ಕುಟುಂಬದವರು ಒಳ್ಳೆಯವರು. ಆದರೆ ನಾವೇ ಅವರನ್ನು ಅರ್ಥ  ಮಾಡಿಕೊಳ್ಳದೆ ಸಾಯುತ್ತಿದ್ದೇವೆ ಎಂದು ಪ್ರೇಮಿಗಳಿಬ್ಬರು ಒಂದೇ ಪತ್ರದಲ್ಲಿ ಬರೆದಿದ್ದಾರೆ. ಈ ಬಗ್ಗೆ  ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ