ಪತಿಯ ಅಗಲಿಕೆಯಿಂದ ನೊಂದು ಪತ್ನಿ ನೇಣಿಗೆ ಶರಣು…

302
firstsuddi

ಬೆಂಗಳೂರು : ಪತಿ ಅಗಲಿಕೆಯಿಂದ ನೊಂದು ಪತ್ನಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರಿನಲ್ಲಿ ನಡೆದಿದೆ.ಮೀನಾ(22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೀನಾ ಇತ್ತೀಚೆಗೆ ಹರೀಶ್ ಎಂಬಾತನೊಂದಿಗೆ  ಅಂತರ್ಜಾತಿ ವಿವಾಹವಾಗಿದ್ದರು.  ಆದರೆ ಕಳೆದ ನವೆಂಬರ್ 21ರಂದು ಹರೀಶ್​ನನ್ನು ಕೊಲೆ ಮಾಡಲಾಗಿತ್ತು. ಮೀನಾ ಅವರ ಸಹೋದರನೇ ಕೊಲೆ ಮಾಡಿದ್ದನೆಂದು ಶಂಕಿಸಲಾಗಿತ್ತು. ಪತಿಯ ಹತ್ಯೆಯಿಂದ ಮನನೊಂದು ಮೀನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.