ಸಿದ್ದಗಂಗಾ ಶ್ರೀಗಳ ಅರೋಗ್ಯದಲ್ಲಿ ಚೇತರಿಕೆ…

224
firstsuddi

ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರು ಕಂಡುಬಂದಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಇಂದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಶ್ರೀಗಳು ಎಂದಿನಂತೆ  ಪೂಜೆ ನೆರವೇರಿಸಿದ್ದಾರೆ. ಭಕ್ತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಮಠದ ಕಿರಿಯ ಸ್ವಾಮೀಜಿ ಶ್ರೀ ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ.                  ಇಂದು  ಡಾ.ಜಿ ಪರಮೆಶ್ವರ್ ಅವರು  ಸ್ವಾಮೀಜಿಯನ್ನು  ಭೇಟಿ ಮಾಡಿ ಅರೋಗ್ಯ ವಿಚಾರಿಸಿದ್ದು,  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಪರಮೆಶ್ವರ್ ಅವರು ಶ್ರೀ ಗಳ ಆರೋಗ್ಯ ಸುಧಾರಿಸಿದೆ. ಅವರು ಎಂದಿನಂತೆ ನನ್ನನ್ನು ಮಾತನಾಡಿಸಿದ್ದಾರೆ ಎಂದಿದ್ದಾರೆ .