ಮೂಡಿಗೆರೆ : ಅಕ್ರಮವಾಗಿ ಸಾಗಿಸುತ್ತಿದ್ದ 5 ಮೂಟೆ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡಿರೋ ಘಟನೆ ಮೂಡಿಗೆರೆ ಸಮೀಪದ ಬಿಳಗುಳದಲ್ಲಿ ನಡೆದಿದೆ. ಹಾಸನ ಮೂಲದ ಲಾರಿಯಲ್ಲಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಸಾಗಿಸುವಾಗ ಮೂಡಿಗೆರೆ ಪಿಎಸ್ ಐ ರಮೇಶ್ ದಾಳಿ ನಡೆಸಿ 5 ಮೂಟೆ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.ಲಾರಿ ಹಾಗೂ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ










