ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಮಸ್ತಾನಮ್ಮ ಅಜ್ಜಿ ಇನ್ನಿಲ್ಲ…

285
firstsuddi

ಆಂಧ್ರ ಪ್ರದೇಶ: ಯೂಟ್ಯೂಬ್ ಸ್ಟಾರ್  ಎಂದೇ ಖ್ಯಾತಿ ಪಡೆದಿದ್ದ ಖಾದ್ಯಪ್ರಿಯರ ಮನಗೆದ್ದಿದ್ದ ಅಜ್ಜಿ  ಮಸ್ತಾನಮ್ಮ ಅವರು ಮೃತಪಟ್ಟಿದ್ದಾರೆ.  ಮಸ್ತಾನಮ್ಮ ಅಜ್ಜಿಗೆ 107 ವರ್ಷ ವಯಸ್ಸಾಗಿದ್ದು, ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುಂಟೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಮಾಸ್ತಾನಮ್ಮ ಅವರ ಹಳ್ಳಿ ಸೊಗಡಿನ ರೆಸಿಪಿಗಳು ಯೂಟ್ಯೂಬ್‌ನಲ್ಲಿ ಪ್ರಸಿದ್ದಿ ಪಡೆದಿದ್ದವು. ಅವರ  ಯೂಟ್ಯೂಬ್ ಚಾನೆಲ್‌ ಗೆ ಲಕ್ಷಾಂತರ ಜನ ಚಂದಾದಾರರಾಗಿದ್ದರು.