ಮೂಡಿಗೆರೆ: ನಳಂದ ಶಾಲಾ ವಾರ್ಷಿಕೊತ್ಸವದ ಅಂಗವಾಗಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾದ್ಯಯರಾದ ಕಣಗಿನ ಹಾಲ್ ಅವರು ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟೋಟ ಸ್ಪರ್ದೆಗಳಲ್ಲಿ ಭಾಗವಹಿಸುವುದು ಮಾನಸಿಕ ಸ್ಥಿರತೆಗೆ ಸಹಕಾರಿಯಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಯಾರು ಶತ್ರುವಲ್ಲ, ಯಾರು ಮಿತ್ರುವಲ್ಲ. ಸೋಲೇ ಗೆಲುವಿನ ಸೋಪಾನ ಎಂಬುದನ್ನು ವಿದ್ಯಾಥಿಗಳು ಅರಿಯಬೇಕು ಹಾಗೂ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದು ಸಲಹೆ ಮಾಡಿದರು.ಈ ಸಂದರ್ಭದಲ್ಲಿ ಶಾಲೆಯ ಅಡಳಿತ ಮಂಡಳಿಯ ಸುರೇಶ್ ಗೌಡ, ಗಾಯಿತ್ರಿ, ಗಣೇಶ್,ಹಿರಿಯ ಶಿಕ್ಷಕಿ ಇರ್ಫಾನ, ಪಂಚಮಿ, ಡಾಲಿ ಸಹ ಶಿಕ್ಷಕರಾದ ಗೋವಿಂದ್, ಸ್ವಾತಿ, ಸವಿತಾ, ಅಕ್ಷತಾ, ಅರ್ಪಿತ, ಕುಬ್ರ, ಸಹನಾ, ಶ್ರುತಿ, ಈರಮ್ಮ, ವಾಣಿ, ಶಾಝಿಯ, ತಾರಿಣೀ, ರೂಕ್ಸರಾ, ಸೌಂದರ್ಯ, ಲವ, ಸೇರಿದಂತೆ ಇತರರು ಇದ್ದರು.









