ಡಾ.ಜಿ ಪರಮೇಶ್ವರ್ ಅವರ ವಿಷ ಹೇಳಿಕೆ ಮೂಲಕ ಜೆಡಿಎಸ್‍ಗೆ ಪ್ರೆಶ್ನೆ ಮಾಡಿದ ಬಿಜೆಪಿ…

211
firstsuddi

ಬೆಂಗಳೂರು: 2014 ರಲ್ಲಿ  ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಈಗಿನ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹೆಚ್.ಡಿ ದೇವೇಗೌಡ ಅವರಿಗೆ ಲೇವಡಿ ಮಾಡಿದ್ದರು. ದೇವೇಗೌಡರು ಜೆಡಿಎಸ್ ಗೆಲ್ಲದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳುತ್ತಾರೆ. ಹೀಗಾಗಿ ಅವರು ವಿಷ ಕುಡಿಯುತ್ತಾರೆ ಎಂದು ಕಾದಿದ್ದೆ, ತೆಗೆದುಕೊಳ್ಳುತ್ತಾನೆ ಇಲ್ಲ ಅವರು ಎಂದು ಹೇಳಿದ್ದ ಆ ವಿಡಿಯೋವನ್ನು ಇಂದು ಕರ್ನಾಟಕ ಬಿಜೆಪಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ದೇವೇಗೌಡರು ವಿಷ ಸೇವಿಸುವುದನ್ನು ಕಾಯುತ್ತಿದ್ದರಂತೆ ಡಿ.ಸಿ.ಎಂ ಪರಮೇಶ್ವರ್. ಅವರ ಮನೆಯ ಮೇಲೂ ಕಲ್ಲು ತೂರುತ್ತಾರಾ ಜೆ.ಡಿ.ಎಸ್ ನ ಸ್ವಾಭಿಮಾನಿ ಕಾರ್ಯಕರ್ತರು? ಎಂದು ಬಿಜೆಪಿ ಟ್ವಿಟ್ ಮಾಡಿದೆ.