ಮೋದಿ ನುಡಿದಂತೆ ನಡೆದಿದ್ದಾರೆ: ಡಿ.ವಿ ಸದಾನಂದ ಗೌಡ…

245
firstsuddi

ಬೆಂಗಳೂರು: ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಟ್ವಿಟ್ ಮಾಡಿದ್ದು,   ಯೋಧರ ಒಂದೊಂದು ರಕ್ತದ ಹನಿಗೂ ನ್ಯಾಯ ಒದಗಿಸುತ್ತೇನೆಂದು ಪ್ರಧಾನಿ ಹೇಳಿದ್ದರು ,ಭಾರತ ಏನು ಮಾಡಬೇಕಿತ್ತೋ ಅದನ್ನು ನಮ್ಮ ಸೇನೆ ಮಾಡಿದೆ. ದಿಟ್ಟ ಹೆಜ್ಜೆಯನ್ನು ಸೇನೆ ಕೈಗೊಂಡಿದೆ , ಪೂರ್ತಿ ಪ್ರಮಾಣದ ಉಗ್ರ ತರಬೇತಿ ಕೇಂದ್ರಗಳು ಧ್ವಂಸ ಆಗಿವೆ,ದೇಶದ ಶಕ್ತಿ ಪರೀಕ್ಷೆ ಮಾಡುವ ಪಾಕಿಸ್ತಾನದ ಪ್ರಯತ್ನ ಸಾಧ್ಯವಿಲ್ಲ ,ಭಾರತ ಎಲ್ಲದಕ್ಕೂ ತಯಾರಾಗಿದೆ.

ಆದರೆ ಭಯೋತ್ಪಾದನೆಯನ್ನು ಮಾತ್ರ ಹತ್ತಿಕ್ಕುವ ಕೆಲಸ ಮಾಡ್ತಿದ್ದೇವೆ ಎಂಬ‌ ಸಂದೇಶವನ್ನು ಮೋದಿ ಯವರು  ಕೊಟ್ಟಿದ್ದಾರೆ . ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ.ಮೋದಿ ನುಡಿದಂತೆ ನಡೆದಿದ್ದಾರೆ ,ಇದನ್ನು‌ ರಾಜಕೀಯ ಮಾಡುವುದು ಸೂಕ್ತ ಅಲ್ಲ ,ಹಿಂದೆ ಯಾರು ಏನು ಮಾಡಿದ್ದರೂ ಪಾಕಿಸ್ತಾನವನ್ನು ಹೆಡೆಮುರಿ‌ ಕಟ್ಟುವ ಕೆಲಸ ಆಗಿರಲಿಲ್ಲ , ಒಳಗೆ ಹೋಗಿ ಹೊರಗೆ ಬಂದಿರಬಹುದು ,ಈಗಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನು ಮಾಡಿದ್ದೇವೆಇದರಲ್ಲಿ ರಾಜಕಾರಣ ಮಾಡುತ್ತಾರೆ ಅಂದರೆ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ,ಪಾಕಿಸ್ತಾನಕ್ಕೆ ಬುದ್ದಿ ಬರದಿದ್ದರೆ ಯುದ್ಧದ ಹಂತಕ್ಕೆ ಹೋಗಬೇಕಾಗುತ್ತದೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.