ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗ ರೆಡ್ಡಿ ಅವರು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಪ್ರಕರಣದಲ್ಲಿ ಬಿಜೆಪಿ ನಾಯಕರ ಕೈವಾಡವಿದೆ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಯತ್ನಿಸಿದ್ದು ಪ್ರಜಾಪ್ರಭುತ್ವ ವಿರೋಧಿ ನಿಲುವು.
ಮೈ ಭೀ ಚೌಕಿದಾರ್ ಎಂದು ಹೇಳುವ ಮೂಲಕ ದೇಶದ ಜನರನ್ನ ಯಾಮಾರಿಸುತ್ತಿದ್ದಾರೆ. ದೇಶದ ನಿಜವಾದ ಕಳ್ಳರಾದ ನೀರವ್ ಮೋದಿ, ಲಲಿತ್ ಮೋದಿ, ಮೆಹಲು ಚೋಕ್ಸಿ, ವಿಜಯ್ ಮಲ್ಯ ರಂತವರನ್ನು ವಿದೇಶಕ್ಕೆ ಓಡಿ ಹೋಗುವಾಗ ಚೌಕಿದಾರ ಏನು ಮಾಡುತ್ತಿದ್ದರು?
ಸುಳ್ಳು ಹೇಳುವುದನ್ನು ಕರಗತ ಮಾಡಿಕೊಂಡಿರುವ ಮೋದಿಯವರು ಗೊಬೆಲ್ಸ್ ಅವರನ್ನೂ ಮೀರಿಸುತ್ತಾರೆ. ಮೋದಿ ಸರ್ಕಾರದ 5 ವರ್ಷದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದವರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಇವರ ಅಧಿಕಾರ ಅವಧಿಯಲ್ಲಿ ಆರ್ ಎಸ್ ಎಸ್ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು ಈಗ ಅದು “ರಿಲಯನ್ಸ್ ಸೇವಾ ಸಂಘ”ವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.










